PWD Notification

Sub-forum for web site related announcements. Generally one can find the information about the site updates, server maintenance issues, user facing problems etc in this sub-forum. Please dont post real estate related topics in this sub-fourm.
Post Reply
Karthikkumar
Posts: 15
Joined: July 23rd, 2018, 12:52 pm

PWD Notification

Post by Karthikkumar »

ರಾಜ್ಯ ಸರ್ಕಾರದ ಆದೇಶ: ಜಿಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕಿರುವ ನಿಯಮ

​ಜಿಲ್ಲಾ ಮುಖ್ಯ ರಸ್ತೆಗಳ ಪಕ್ಕದಲ್ಲಿ ಮನೆ, ಅಂಗಡಿ, ಯಾವುದೇ ವಾಣಿಜ್ಯ ಕಟ್ಟಡ ಕಟ್ಟುವ ಯೋಚನೆಯಲ್ಲಿದ್ದರೆ, ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಹೊರಡಿಸಿರುವ ಈ ಆದೇಶವನ್ನು ಗಮನಿಸುವುದು ಅತ್ಯಗತ್ಯ. ​ಇದುವರೆಗೆ ಕೇವಲ 'ರಾಜ್ಯ ಹೆದ್ದಾರಿ'ಗಳಿಗೆ ಮಾತ್ರ ಅನ್ವಯಿಸುತ್ತಿದ್ದ "ಕಟ್ಟಡ ರೇಖೆ" ಅಂತರದ ನಿಯಮವನ್ನು, ಇದೀಗ ಜಿಲ್ಲಾ ಮುಖ್ಯ ರಸ್ತೆಗಳಿಗೂ ಅನ್ವಯವಾಗುವಂತೆ ಸರ್ಕಾರವು ಫೆಬ್ರವರಿ 17, 2025 ರಂದು ಹೊಸ ಆದೇಶವನ್ನು ಹೊರಡಿಸಿದೆ.

​ಹೊಸ ನಿಯಮದ ಪ್ರಕಾರ ದಾಖಲಿತ ರಸ್ತೆಯ ಭೂಗಡಿಯ ಅಂಚಿನಿಂದ ಕಟ್ಟಡವು 6 ಮೀಟರ್ ಅಂತರ ನಿಗದಿತ ಅಂತರ ದಲ್ಲಿರಬೇಕು. ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್ (ನಗರ ಸಭೆ), ಟೌನ್ ಮುನ್ಸಿಪಲ್ ಕೌನ್ಸಿಲ್ (ಪುರಸಭೆ), ಟೌನ್ ಪಂಚಾಯತ್ (ಪಟ್ಟಣ ಪಂಚಾಯಿತಿ), ಮತ್ತು ಗ್ರಾಮ ಪಂಚಾಯಿತಿಯ (ಪ್ರತಿ ಗ್ರಾಮಠಾಣಾ) ಮಿತಿಗಳಲ್ಲಿ ಬರುವ ಜಿಲ್ಲಾ ಮುಖ್ಯ ರಸ್ತೆಗಳ ಬದಿಯಲ್ಲಿ ಕಟ್ಟಡ ನಿರ್ಮಿಸಲು 6 ಮೀಟರ್ ಜಾಗವನ್ನು ಬಿಡಬೇಕು. ಸಿಟಿ ಕಾರ್ಪೊರೇಷನ್ ಮಿತಿಯಿಂದ 15 ಕಿ.ಮೀ. ದೂರದವರೆಗಿನ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಲು ರಸ್ತೆಯ ಅಂಚಿನಿಂದ 12 ಮೀಟರ್ ಅಂತರವನ್ನು ಕಡ್ಡಾಯವಾಗಿ ಬಿಡಬೇಕು.

​ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಹಾಗೂ ಪರಿಮಿತಿಗಳನ್ನು ನಿಗದಿಪಡಿಸಿ ನೀಡುವುದು ಆಯಾ ಸ್ಥಳೀಯ ಪ್ರಾಧಿಕಾರಗಳಾದ ಪಂಚಾಯಿತಿ, ನಗರಸಭೆ ಇತ್ಯಾದಿಗಳ ಹೊಣೆಗಾರಿಕೆ ಆಗಿದೆ. ​ರಸ್ತೆಯ ಅಧಿಕೃತ ಗಡಿಯ ಅಂಚನ್ನು ಗುರುತಿಸುವ ಜವಾಬ್ದಾರಿಯನ್ನು ಕರ್ನಾಟಕ ಹೆದ್ದಾರಿ ಕಾಯಿದೆ 1964 ರ ಪ್ರಕಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ನೀಡಲಾಗಿದೆ. ​ಈ ಹೊಸ ನಿಯಮವು ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡಕ್ಕೂ ಅನ್ವಯ ಆಗುವುದರಿಂದ, ಹೊಸದಾಗಿ ಕಟ್ಟಡ ನಿರ್ಮಿಸುವವರು ಸ್ಥಳೀಯ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯುವಾಗ ಈ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
Attachments
FB_IMG_1772684944777.jpg
FB_IMG_1772684936874.jpg
Post Reply

Return to “Announcements”